ನಮ್ಮ ಹರವು

Haravu Karnataka 571427, -NA-, 571427
ನಮ್ಮ ಹರವು ನಮ್ಮ ಹರವು is one of the popular Hindu Temple located in Haravu Karnataka 571427 ,-NA- listed under Public services & government in -NA- ,

Contact Details & Working Hours

More about ನಮ್ಮ ಹರವು

ಹರವು ಎಂಬ ಪದದ ಅರ್ಥವೆ ವಿಶಾಲವಾದ ಸಂಮೃದ್ಧಿಯಿಂದ ಕೂಡಿರುವ ಪ್ರದೇಶ ಎಂದು.ಈ ಗ್ರಾಮಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ.ಕ್ರಿ.ಶ.1369ರಲ್ಲೆ ವಿಜಯನಗರ ಅರಸರಾದಂತಹ ರಾಜ ವೀರ ಬುಕ್ಕಣ್ಣವಡೆಯರ್ ಈ ಒಂದು ಗ್ರಾಮದಲ್ಲಿ ವಿಶಾಲವಾದ ಶ್ರೀ ರಾಮನ ದೇವಸ್ಥಾನ ಕಟ್ಟಿದ್ದಾರೆ.1455ರ ದೇವಸ್ಥಾನದಲ್ಲಿ ದೊರೆತಿರುವ ಒಂದು ಶಾಸನದ ಪ್ರಕಾರ ಹರವು ಒಂದು ವ್ಯಾಪಾರಿ ಕೇಂದ್ರವಾತ್ತೆಂದು ಕಂಡುಬರುತ್ತದೆ.
ಈ ದೇವಸ್ಥಾನವು 1996ರಲ್ಲಿ ಪುರಾತತ್ವ ಇಲಾಖೆಯಿಂದ ಮನ್ನಣೆ ಪಡೆದು ಅದರ ನಿರ್ವಹಣೆಯನ್ನು ಆ ಇಲಾಖೆಯೇ ನಿರ್ವಹಿಸುತ್ತಿದೆ.ಈ ಗ್ರಾಮದ ಇನ್ನೊಂದು ಹಿರಿಮೆಯೆಂದರೆ RBI ಗೌರ್ನರ್ ಆಗಿದ್ದಂತಹ ಎಚ್.ವಿ.ಆರ್.ಐಯ್ಯಂಗರ್ ರವರು ಇದೇ ಗ್ರಾಮದವರು.ಮೊದಲು ಗ್ರೂಪ್ ಪಂಚಾಯಿತಿಯ ಕಾಲದಲ್ಲು ಕೇಂದ್ರ ಸ್ಥಾನವನ್ನು ಹೊಂದಿದ್ದ ಈ ಗ್ರಾಮವು ಮಂಡಲ ಪಂಚಾಯಿತಿಯಲ್ಲಿ ಕ್ಯಾತನಹಳ್ಳಿಗೆ ವಿಲೀನಗೊಂಡು ಮತ್ತೆ ಗ್ರಾಮ ಪಂಚಾಯಿತಿಯಾದಾಗ 1994ರಲ್ಲಿ ಹರವು ಗ್ರಾಮ ಪಂಚಾಯಿತಿಯಾಗಿ ರೂಪುಗೊಂಡಿತು.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರವು ಸೇರಿದಂತೆ ಐದು ಕಂದಾಯ ಗ್ರಾಮಗಳು ಬರುತ್ತವೆ.ಅವುಗಳೆಂದರೆ ಹರವು,ಶ್ಯಾದನಹಳ್ಳಿ,ಎಲೆಕೆರೆ,ಚೆಲುವರಸನಕೊಪ್ಪಲು & ಎಣ್ಣೆಹೊಳೆಕೊಪ್ಪಲು.ಈ ಪಂಚಾಯಿತಿ ವ್ಯಾಪ್ತಿಯು ಸುಮಾರು 3ಕಿ.ಮೀ ವ್ಯಾಸವನ್ನು ಹೊಂದಿದ್ದು ಅರಳಕುಪ್ಪೆ,ಬೆಟ್ಟಹಳ್ಳಿ,ಕೆನ್ನಾಳು & ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯೊಂದಿಗೆ ಗಡಿ ಹಂಚಿಕೊಂಡಿದೆ.ಜೊತೆಗೆ ಕನ್ನಡ ನಾಡಿನ ಜೀವ ನದಿಯಾದ ಕಾವೇರಿ ನದಿಯು ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವುದು ಒಂದು ವಿಶೇಷ.
ಹಿಂದುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡುಬರುತ್ತಾರೆ.ಸುಮಾರು 25 ಮುಸ್ಲಿಂ ಕುಟುಂಬಗಳು ಕಂಡುಬರುತ್ತವೆ.ಈ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಲ್ಲು ಗ್ರಾಮ ದೇವತೆ ಹಬ್ಬಗಳನ್ನು ಆಚರಿಸುತ್ತಾರೆ.
ಒಕ್ಕಲಿಗರೇ ಹೆಚ್ಚಾಗಿರುವ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ಕಸುಬು ಕೃಷಿಯಾಗಿದ್ದು ಹೆಚ್ಚಿನ ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ.ಜೊತೆಗೆ ಕಮ್ಮಾರರು,ಬಡಿಗಿಗಳು,ವ್ಯಾಪಾರಸ್ಥರು ಕಂಡುಬರುತ್ತಾರೆ.ಇಲ್ಲಿನ ಜನರು ಸಾಮರಸ್ಯದ ಬದುಕನ್ನು ನೆಡೆಸುತ್ತಾರೆ.ಯಾವುದೇ ಜಾತಿ ಧರ್ಮದ ವೈಶಮ್ಯ ಕಂಡುಬರುವುದಿಲ್ಲ.ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನದಿ ಹರುಯುವುದರಿಂದ ವಿಶ್ವೇಶ್ವರಯ್ಯ ನಾಲೆ ಪಂಚಾಯಿತಿ ವ್ಯಾಪ್ತಿಯ ಮದ್ಯಭಾಗದಲ್ಲೆ ಹರಿಯುವುದರಿಂದ ಶೇ.75%ರಷ್ಟು ನೀರಾವರಿ ಪ್ರದೇಶವನ್ನು ಹೊಂದಿದ್ದು ಕೃಷಿಯ ಕಸುಬಾದರು ಜನರು ಆರ್ಥಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಬಲರಾಗಿದ್ದಾರೆ.

Map of ನಮ್ಮ ಹರವು